ಹರೆಯದ ಹುಡುಗಿಯೊಬ್ಬಳು ತರುಣ ಡಾಕ್ಟರ್ ಬಳಿ ತಪಾಸಣೆಗೆಂದು ಹೋಗಿದ್ದಳು. ಡಾಕ್ಟರಿಗೆ ಅವಳನ್ನು ನೋಡಿದೊಡನೆ ಪ್ರೇಮ ಜ್ವರ ಶುರುವಾಯ್ತು.
“ಎಲ್ಲಿ, ನಿಮ್ಮನ್ನು ಪೂರ್ಣವಾಗಿ ತಪಾಸಣೆ ಮಾಡಬೇಕು, ನಿಮ್ಮ ಎಲ್ಲಾ ಬಟ್ಟೆಗಳನ್ನು ಬಿಚ್ಚಿಬಿಡಿ” ಎಂದರು ಡಾಕ್ಟರ್
“ಅಯ್ಯೊ ಡಾಕ್ಟರ್, ನನಗೆ ನಾಚಿಕೆಯಾಗುತ್ತಿದೆ, ನಾನು ಇಲ್ಲಿಯವರೆಗೂ ಯಾರ ಮುಂದೆಯೂ ಬೆತ್ತಲಾಗಿಲ್ಲ. ನೀವು ಲೈಟ್ ಆಫ್ ಮಾಡಿದರೆ ಬಿಚ್ಚುತ್ತೇನೆ” ನುಲಿದಳು ಹುಡುಗಿ
ಡಾಕ್ಟರು ಲೈಟ್ ಆಫ್ ಮಾಡಿದರು. ತರುಣಿ ಕತ್ತಲಲ್ಲೇ ಸರಸರನೆ ಬಟ್ಟೆ ಬಿಚ್ಚಿ ಕೇಳಿದಳು,
“ನನ್ನ ಡ್ರೆಸ್ ಎಲ್ಲಿ ಇಡಲಿ ಡಾಕ್ಟರ್ ?”
“ಅಲ್ಲಿ ಚೇರ್ ಮೇಲೆ, ನನ್ನ ಬಟ್ಟೆ ಪಕ್ಕದಲ್ಲೇ ಇಡು”