ವೆಬ್ ಪುಟವನ್ನು ಪೂರ್ತಿಯಾಗಿ scroll ಮಾಡಿ ಓದಿ, ಮತದಾನದಲ್ಲಿ ಭಾಗವಹಿಸಿ, ಕಾಮೆಂಟ್ ಮಾಡಿ. ಪ್ರಕಟವಾಗುವ ಲೇಖನ/ನಗೆಹನಿ/ಕವನಗಳಿಗೆ ಸ್ಟಾರ್ ರೇಟಿಂಗ್ ಕೊಟ್ಟು ಉತ್ತೇಜಿಸಿ. ನೀವು ಉತ್ತೇಜನಗೊಳ್ಳಿರಿ, ನಮಗೂ ಹೆಚ್ಚು ಹೆಚ್ಚು ಬರೆಯುವ ಹಾಗೆ ಉತ್ತೇಜಿಸಿ, ಇತರರಿಗು ಉತ್ತೇಜಿಸಿ.

ಸೂಚನೆ:

ಬ್ಲಾಗ್ ವಿನ್ಯಾಸ ಬದಲಾಯಿಸಿರುವುದರಿಂದ, VOTE/Poll ವಿಭಾಗವನ್ನು ಮೊದಲಿನ ಹಾಗೆ ಪೋಸ್ಟ್‌ನ ಪಕ್ಕಕೆ ಇರದೆ, ಪೋಸ್ಟ್‌ನ ಕೆಳಗೆ ಸರಿಸಲಾಗಿದೆ. ಅದರಲ್ಲಿ ಭಾಗವಹಿಸಿ ನಿಮ್ಮ ಅನಿಸಿಕೆಗಳನ್ನು ತಿಳಿಸಿ ನಮ್ಮನ್ನು ಉತ್ತೇಜಿಸಬೇಕಾಗಿ ವಿನಂತಿ

ಗುರುವಾರ, ಜುಲೈ 9, 2009

ಮನೆ ಅಳಿಯ

ಒಮ್ಮೆ ಸಂಜೆ,ಮನೆಯೊಳಗೆ ಟಿವಿ ನೋಡುತ್ತಾ ಗಂಡ ಕಡ್ಳೆಕಾಯಿನ ಗಾಳಿಯಲ್ಲಿ ಎಸೆದು ಬಾಯಿಗೆ ಹಾಕಿಕೊಳ್ಳುತ್ತಿರುತ್ತಾನೆ.ಹೀಗಿರುವಾಗ ಅಡುಗೆ ಮನೆಯಲ್ಲಿದ್ದ ಹೆಂಡತಿ ಕರೆದಳು ಅಂತ ಅಕಸ್ಮಾತಾಗಿ ತಿರುಗಿದ ಕಾರಣ ಗಾಳಿಯಲ್ಲಿ ಎಸೆದ ಕಡಲೆ ಬೀಜ ನೇರವಾಗಿ ಕಿವಿಯೊಳಗೆ ಬೀಳುತ್ತದೆ. ಅದನ್ನು ತೆಗೆಯಲು ಗಂಡ ಹೆಂಡತಿ ಎಷ್ಟು ಪ್ರಯತ್ನಿಸಿದರು ಹೊರಗೆ ಬಾರದೆ,ಪ್ರಯತ್ನಪಟ್ಟಷ್ಟು ಒಳಗೆ ಹೋಗುತ್ತಿರುತ್ತದೆ. ಬೇಸತ್ತ ಗಂಡ ಹೆಂಡತಿ ವೈದ್ಯರ ಹತ್ತಿರ ಹೋಗಬೇಕೆನ್ನುವಷ್ಟರಲ್ಲಿ ಮಗಳು ಬಾಯ್-ಫ್ರೆಂಡ್ ಜೊತೆಗೆ ಮನೆಗೆ ಬರುತ್ತಾಳೆ.ಇವರ ಕಷ್ಟ ಕೇಳಿ ಬಾಯ್-ಫ್ರೆಂಡ್ ನಾನು ಸಹಾಯ ಮಾಡುತ್ತೇನೆ ಎಂದು ಹುಡುಗಿಯ ತಂದೆಯನ್ನು ನೇರವಾಗಿ ಕೂರಲು ಹೇಳುತ್ತಾನೆ. ಆಗ ತನ್ನ ಎರಡು ಬೆರೆಳುಗಳನ್ನು ಅವನ ಮೂಗಿನಲ್ಲಿ ಗಟ್ಟಿಯಾಗಿ ತೂರಿಸಿ ಜೋರಾಗಿ ಮೂಗಿನಿಂದ ಗಾಳಿ ಬಿಡಲು ಹೇಳುತ್ತಾನೆ.ಆ ಒತ್ತಡಕ್ಕೆ ಕಿವಿಯಲ್ಲಿದ್ದ ಕಡಲೆ ಬೀಜ ಹೊರಬೀಳುತ್ತದೆ. ಆ ಹುಡುಗ ಹೋದ ನಂತರ ಹೆಂಡತಿ ಗಂಡನಿಗೆ ಹೇಳುತ್ತಾಳೆ, ಎಷ್ಟು ಜಾಣ ಹುಡುಗ, ಮುಂದೆ ಇವನು ಏನಾಗಬಹುದು ಎನ್ನುತ್ತೀರಾ? ಅದಕ್ಕೆ ಗಂಡ ಹೇಳುತ್ತಾನೆ,"ಅವನು ಮುಂದೆ ಜೀವನದಲ್ಲಿ ಏನಾಗುತ್ತಾನೊ ಬಿಡುತ್ತಾನೆ ನಂಗೊತ್ತಿಲ್ಲಾ ಆದ್ರೆ ಅವನ ಬೆರೆಳುಗಳನ್ನು ಮೂಸಿದ ಮೇಲೆ ಖಂಡಿತವಾಗಿಯು ನನ್ನ ಅಳಿಯ ಆಗುತ್ತಾನೆ ಅಂತ ಖಾತ್ರಿಯಾಯಿತು" ಎನ್ನುತ್ತಾನೆ.

Ratings and Recommendations by outbrain

ಇದರಲ್ಲಿ ಯಾವುದು ಚೆಂದ?